Sandbox

Sandbox is a multipurpose HTML5 template with various layouts which will be a great solution for your business.

Contact Info

Moonshine St. 14/05
Light City, London

info@email.com
00 (123) 456 78 90

Learn More

Follow Us

ಕವಿಪ್ರನಿ ನೌಕರರ ಸಂಘದ ಪಕ್ಷಿ ನೋಟ

ದಕ್ಷಿಣ ಏಷ್ಯಾದಲ್ಲಿ ಪ್ರಪ್ರಥಮವಾಗಿ ಕರ್ನಾಟಕದ ಶಿವನಸಮುದ್ರದಲ್ಲಿ 1902 ರಲ್ಲಿ ಜಲ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಲಾಯಿತು. 1902 ರಲ್ಲಿ ಕೋಲಾರಕ್ಕೆ, 1905 ರಲ್ಲಿ ಬೆಂಗಳೂರಿಗೆ, 1908 ರಲ್ಲಿ ಮೈಸೂರಿಗೆ ಹೀಗೆ ಹಂತ ಹಂತವಾಗಿ 1925 ರ ನಂತರ ರಾಜ್ಯದ ಹಲವು ನಗರ, ಪಟ್ಟಣ, ಗ್ರಾಮಗಳು ವಿದ್ಯುದೀಕರಣಗೊಂಡವು.

ವಿದ್ಯುತ್‌ ಕಾರ್ಮಿಕ ಸಂಘಟನೆಯ ಕಾರ್ಯ 1953 ರಲ್ಲಿ ಪ್ರಾರಂಭಗೊಂಡು, ಮೈಸೂರು ರಾಜ್ಯ ವಿದ್ಯುತ್‌ ನೌಕರರ ಸಂಘವು, ಟ್ರೇಡ್ ಯೂನಿಯನ್ ಕಾಯ್ದೆಯಡಿಯಲ್ಲಿ 1964 ನೇ ಜುಲೈ 18 ರಂದು ನೋಂದಣಿ ಸಂಖ್ಯೆ 659 ರೊಂದಿಗೆ ನೋಂದಣಿಯಾಯಿತು. ದಿ|| ವೇದಗಿರಿ ನಾಯಗಾರ್‌ರವರು ನೋಂದಾಯಿತ ಸಂಘದ ಮೊದಲ ಅಧ್ಯಕ್ಷರಾಗಿದ್ದರು. ದಿನಾಂಕ: 25.04.1978 ರಲ್ಲಿ “ಕರ್ನಾಟಕ ವಿದ್ಯುತ್ ಮಂಡಳಿ ನೌಕರರ ಸಂಘ” ವೆಂದು ಮರುನಾಮಕರಣಗೊಂಡಿತು.

ಕವಿಪ್ರನಿ ನೌಕರರ ಸಂಘದ ಪಕ್ಷಿ ನೋಟ

ದಕ್ಷಿಣ ಏಷ್ಯಾದಲ್ಲಿ ಪ್ರಪ್ರಥಮವಾಗಿ ಕರ್ನಾಟಕದ ಶಿವನಸಮುದ್ರದಲ್ಲಿ 1902 ರಲ್ಲಿ ಜಲ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಲಾಯಿತು. 1902 ರಲ್ಲಿ ಕೋಲಾರಕ್ಕೆ, 1905 ರಲ್ಲಿ ಬೆಂಗಳೂರಿಗೆ, 1908 ರಲ್ಲಿ ಮೈಸೂರಿಗೆ ಹೀಗೆ ಹಂತ ಹಂತವಾಗಿ 1925 ರ ನಂತರ ರಾಜ್ಯದ ಹಲವು ನಗರ, ಪಟ್ಟಣ, ಗ್ರಾಮಗಳು ವಿದ್ಯುದೀಕರಣಗೊಂಡವು.

ವಿದ್ಯುತ್‌ ಕಾರ್ಮಿಕ ಸಂಘಟನೆಯ ಕಾರ್ಯ 1953 ರಲ್ಲಿ ಪ್ರಾರಂಭಗೊಂಡು, ಮೈಸೂರು ರಾಜ್ಯ ವಿದ್ಯುತ್‌ ನೌಕರರ ಸಂಘವು, ಟ್ರೇಡ್ ಯೂನಿಯನ್ ಕಾಯ್ದೆಯಡಿಯಲ್ಲಿ 1964 ನೇ ಜುಲೈ 18 ರಂದು ನೋಂದಣಿ ಸಂಖ್ಯೆ 659 ರೊಂದಿಗೆ ನೋಂದಣಿಯಾಯಿತು. ದಿ|| ವೇದಗಿರಿ ನಾಯಗಾರ್‌ರವರು ನೋಂದಾಯಿತ ಸಂಘದ ಮೊದಲ ಅಧ್ಯಕ್ಷರಾಗಿದ್ದರು. ದಿನಾಂಕ: 25.04.1978ರಲ್ಲಿ “ಕರ್ನಾಟಕ ವಿದ್ಯುತ್ ಮಂಡಳಿ ನೌಕರರ ಸಂಘ” ವೆಂದು ಮರುನಾಮಕರಣಗೊಂಡಿತು.

1974 ರಲ್ಲಿ ಮಹತ್ವವಾದ ವರ್ಕಲೋಡ್ ನಾರ್ಮ್ (ನೌಕರರ ಕಾರ್ಯಭಾರ ನೀತಿ) ಒಪ್ಪಂದ ಮಾಡಿಕೊಳ್ಳಲಾಯಿತು. 1975 ರಲ್ಲಿ ದಿ|| ವೇದಗಿರಿ ನಾಯಗಾರ್‌ರವರು ವಯೋನಿವೃತ್ತಿ ಹೊಂದಿದ ನಂತರ ಉಪಾಧ್ಯಕ್ಷರಾಗಿದ್ದ ದಿ|| ಎ. ತಿಮ್ಮಯ್ಯನವರು ಅಧ್ಯಕ್ಷ ಸ್ಥಾನ ಅಲಂಕರಿಸಿದರು.

1978 ರಲ್ಲಿ ಅಂದಿನ ಪ್ರಧಾನ ಮಂತ್ರಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರ 20 ಅಂಶಗಳ ಆರ್ಥಿಕ ಯೋಜನೆಯ ಕಾರ್ಯಕ್ರಮಗಳಲ್ಲಿ ಆಡಳಿತದಲ್ಲಿ ಕಾರ್ಮಿಕರ ಪ್ರಾತಿನಿಧ್ಯ ನೀಡಬೇಕೆಂಬುದನ್ನು ಕರ್ನಾಟಕ ಸರ್ಕಾರ ಪುರಸ್ಕರಿಸಿ ನಮ್ಮ ಮಂಡಳಿಯಲ್ಲಿ ಸಂಘದ ಅಧ್ಯಕ್ಷರಿಗೆ ನಿರ್ದೇಶಕ ಸ್ಥಾನ ನೀಡಿ, ಪುರಸ್ಕರಿಸಿದ್ದು ಹಾಗೂ ಮುಂದುವರೆಸಿಕೊಂಡು ಬರುತ್ತಿರುವುದು ಸಂಘಕ್ಕೆ ಹೆಮ್ಮೆಯ ಸಂಗತಿ. ಸಂಘದ ಧೀಮಂತ ನಾಯಕರಾದ ದಿ|| ಎ. ತಿಮ್ಮಯ್ಯರವರನ್ನು ಪ್ರಥಮವಾಗಿ ವಿದ್ಯುತ್ ಮಂಡಳಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. ಇದು ಭಾರತ ದೇಶದಲ್ಲಿಯೇ ಪ್ರಪ್ರಥಮವಾಗಿ ನೌಕರರ ಸಂಘದ ಪ್ರತಿನಿಧಿಯನ್ನು ಆಡಳಿತ ಮಂಡಳಿಯಲ್ಲಿ ನೇಮಕ ಮಾಡಿದ್ದು ಚರಿತ್ರೆಯಾಗಿ ದಾಖಲೆಯಾಗಿದೆ.

ಸಂಘದ ಅಧ್ಯಕ್ಷರಾಗಿದ್ದ ದಿ|| ಎ. ತಿಮ್ಮಯ್ಯ ರವರ ನೇತೃತ್ವದಲ್ಲಿ 1980 ರಲ್ಲಿ ದಕ್ಷಿಣ ಭಾರತೀಯ ವಿದ್ಯುತ್ ಮಂಡಳಿಗಳ ಫೆಡರೇಷನ್ ಸ್ಥಾಪನೆಯಾಯಿತು.

ಸಂಘವು 1978 ರಲ್ಲಿ 4000 ಕ್ಕೂ ಹೆಚ್ಚು ತಾತ್ಕಾಲಿಕ ಕೆಲಸಗಾರರ ಸೇವೆಯನ್ನು ಮಂಡಳಿಯ ಸೇವೆಯಲ್ಲಿ ವಿಲೀನಗೊಳಿಸಿ, ಖಾಯಂಗೊಳಿಸಲಾಯಿತು. 1981 ರಲ್ಲಿ ಟಿಟಿಆರ್ (Temporary Time Roll) ನೌಕರರ ಸೇವೆಯನ್ನು ಖಾಯಂಗೊಳಿಸಲು ಒಪ್ಪಂದವನ್ನು ಮಾಡಿಕೊಳ್ಳಲಾಯಿತು. 2005 ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ನಮ್ಮ ನಿಗಮಗಳಲ್ಲಿ ಮಾರ್ಚ್-2003 ರವರೆಗೆ ಮದ್ದೂರ್ ಗ್ಯಾಂಗ್‌ಮನ್‌ಗಳಾಗಿ ಸೇವೆಯಲ್ಲಿದ್ದ 7528 ಮದ್ದೂರ್ ಗ್ಯಾಂಗ್‌ಮೆನ್‌ಗಳ ಸೇವೆಯನ್ನು ಖಾಯಂಗೊಳಿಸುವ ಒಪ್ಪಂದ ಮಾಡಿಕೊಳ್ಳಲಾಯಿತು.

ನಮ್ಮ ಸಂಘವು ಆಡಳಿತ ವರ್ಗಕ್ಕೆ ಕಾಲಾನುಕಾಲಕ್ಕೆ ಸಲ್ಲಿಸುತ್ತಿರುವ ಬೇಡಿಕೆ ಪಟ್ಟಿಯನ್ನು ಸಾಮೂಹಿಕ ಒಪ್ಪಂದದಿಂದ ಪರಸ್ಪರ ಚರ್ಚಿಸಿ ನೌಕರರ ವೇತನ ಶ್ರೇಣಿ, ಭತ್ಯೆ ಮೊದಲಾದವುಗಳನ್ನು ಕಾಲಕಾಲಕ್ಕೆ ಪರಿಷ್ಕರಣೆಗೊಳಿಸಿ ಒಪ್ಪಂದದ ಮೂಲಕ ಜಾರಿಗೊಳಿಸಲಾಗುತ್ತಿದೆ.

“ಕಾರ್ಮಿಕರು ಮತ್ತು ಕಾರ್ಮಿಕ ಸಂಘವೂ ಸಮಾಜದ ಪ್ರಮುಖ ಅಂಗ” ಎಂಬ ವಿಚಾರಧಾರೆ ಹೊಂದಿದ್ದ ಸಂಘದ ಅಧ್ಯಕ್ಷರಾದ ದಿ|| ಎ. ತಿಮ್ಮಯ್ಯರವರಿಂದ ಬೆಂಗಳೂರಿನಲ್ಲಿ ನೌಕರರ ಕಲ್ಯಾಣ ಕಾರ್ಯಕ್ರಮ, ಚಟುವಟಿಕೆಗಳಿಗಾಗಿ ಸಮುದಾಯ ಭವನ ನಿರ್ಮಿಸಲು ದಿನಾಂಕ: 17.10.1985 ರಂದು ಶಂಕುಸ್ಥಾಪನೆ ನೆರವೇರಿಸಿದರು. ಪ್ರಸ್ತುತ ಸಂಘದ ಒಡೆತನದಲ್ಲಿ ರಾಜ್ಯಾದ್ಯಂತ 22 ಸಮುದಾಯ ಭವನಗಳು ನೌಕರರ ಕಲ್ಯಾಣಕ್ಕಾಗಿ ನಿರ್ಮಾಣಗೊಂಡು ಕಾರ್ಯನಿರ್ವಹಿಸುತ್ತಿವೆ. ಇನ್ನೂ ಹಲವು ಸಮುದಾಯ ಭವನಗಳನ್ನು ನಿರ್ಮಿಸುವ ಯೋಜನೆಯೂ ಇದೆ.

ಸಂಘವು ಕೇಂದ್ರ ಸಮಿತಿ, ಸ್ಥಳೀಯ ಸಮಿತಿ ಮತ್ತು ಪ್ರಾಥಮಿಕ ಸಮಿತಿಗಳಾಗಿ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಾದ್ಯಂತ 95 ಸ್ಥಳೀಯ ಸಮಿತಿಗಳು 371 ಪ್ರಾಥಮಿಕ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 45,000 ಕ್ಕಿಂತ ಅಧಿಕ ಸದಸ್ಯರನ್ನು ಹೊಂದಿ, ಏಷ್ಯಾದಲ್ಲೇ ಒಂದು ಸಂಸ್ಥೆಗೆ ಒಂದೇ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಆರಂಭದಿಂದಲೂ ಅಡಳಿತ ವರ್ಗದಿಂದ ಮಾನ್ಯತೆ ಹೊಂದಿರುತ್ತದೆ.

ನಮ್ಮ ನಿಗಮಗಳಲ್ಲಿ ಕೆಲಸ ನಿರ್ವಹಿಸಿ ವಯೋನಿವೃತ್ತಿ ಹೊಂದುವ ಸಂಘದ ಸದಸ್ಯರಿಗೆ ರೂ.15,000/-ನಿವೃತ್ತಿ ಪರಿಹಾರ ಹಾಗೂ ಕರ್ತವ್ಯ ನಿರ್ವಹಿಸುವಾಗ ಮರಣ ಹೊಂದಿದ ಸದಸ್ಯರ ಅವಲಂಬಿತರಿಗೆ ರೂ.40,000/-ಗಳ ಮರಣ ಪರಿಹಾರವನ್ನು ನೀಡುವ ಸೌಲಭ್ಯವಿದೆ.

ಸಂಘದ ಒತ್ತಾಸೆಯಿಂದ ರಾಷ್ಟ್ರೀಕೃತ ಬ್ಯಾಂಕುಗಳಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳಲ್ಲಿ ವೇತನ ಪಡೆಯುವ ನಮ್ಮ ನೌಕರರಿಗೆ ಯಾವುದೇ ಪ್ರೀಮಿಯಂ ಪಾವತಿಸದೆ ರೂ.1,00,00,000/- (ಒಂದು ಕೋಟಿ) ರೂಪಾಯಿ ಅಪಘಾತ ವಿಮಾ ಸೌಲಭ್ಯ ಒದಗಿಸಲಾಗಿದೆ.

ಕವಿಪ್ರನಿ ನೌಕರರ ಸಂಘವು ನಿಗಮದಲ್ಲಿರುವ ಇತರ ನೌಕರ ಸಂಘ ಸಂಸ್ಥೆಗಳಾದ ಕೆ.ಇ.ಬಿ ಇಂಜಿನಿಯರುಗಳ ಸಂಘ, ಕೆ.ಇ.ಬಿ ಲೆಕ್ಕಾಧಿಕಾರಿಗಳ ಸಂಘ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಂಸ್ಥೆ ಮೊದಲಾದ ಸಮಾನ ಉದ್ದೇಶ ಹೊಂದಿರುವ ಸಂಸ್ಥೆಗಳಿಂದ ರಚಿತವಾಗಿರುವ “ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಸಂಸ್ಥೆಗಳ ಒಕ್ಕೂಟವು ಅನೇಕ ವರ್ಷಗಳಿಂದ ನೌಕರರ ಬೇಡಿಕೆಗಳ ಬಗ್ಗೆ ಒಗ್ಗಟ್ಟು ಮತ್ತು ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿದ್ದು, ಸದರಿ ಒಕ್ಕೂಟದ ಪದನಿಮಿತ್ತ ಅಧ್ಯಕ್ಷರಾಗಿ ನಮ್ಮ ಸಂಘದ ಅಧ್ಯಕ್ಷರೇ ಅಧ್ಯಕ್ಷರಾಗಿ ಯಶಸ್ವಿಯಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಕವಿಪ್ರನಿ ನೌಕರರ ಸಂಘದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು

ಕವಿಪ್ರನಿ ನೌಕರರ ಸಂಘದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು

ಕವಿಪ್ರನಿ ನೌಕರರ ಸಂಘದಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದವರು

ಕವಿಪ್ರನಿ ನೌಕರರ ಸಂಘದಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದವರು