Sandbox

Sandbox is a multipurpose HTML5 template with various layouts which will be a great solution for your business.

Contact Info

Moonshine St. 14/05
Light City, London

info@email.com
00 (123) 456 78 90

Learn More

Follow Us

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದ ಇತಿಹಾಸ

ದಕ್ಷಿಣ ಏಷ್ಯಾದಲ್ಲಿ ಪ್ರಪ್ರಥಮವಾಗಿ ಕರ್ನಾಟಕದ ಶಿವನಸಮುದ್ರದಲ್ಲಿ 1902 ರಲ್ಲಿ ಜಲವಿದ್ಯುತ್‌ ಉತ್ಪಾದಿಸಿದ ರಾಜ್ಯ ನಮ್ಮದು. ಅಲ್ಲದೆ, 1902 ರಲ್ಲಿ ಪ್ರಪಂಚದಲ್ಲೇ ಅತ್ಯಂತ ಉದ್ದನೆಯ (147 ಕಿ.ಮೀ) ಹೈವೋಲ್ವೇಜಿನ 35 ಕೆವಿ ಮಾರ್ಗದ ಮೂಲಕ ಶಿವನಸಮುದ್ರದಿಂದ ಕೋಲಾರದ ಚಿನ್ನದ ಗಣಿ ಕೆ.ಜಿ.ಎಫ್ ಗಾಗಿ ಪ್ರಪ್ರಥಮವಾಗಿ ವಿದ್ಯುತ್‌ ಹರಿಸಿದ ಹೆಗ್ಗಳಿಕೆಯೂ ನಮ್ಮ ರಾಜ್ಯಕ್ಕಿದೆ.

05 ಆಗಸ್ಟ್ 1905 ರಲ್ಲಿ ಬೆಂಗಳೂರಿನ ಸಿಟಿ ಮಾರುಕಟ್ಟೆ ಬಳಿಯ ಬೀದಿ ದೀಪಗಳಿಗೆ ಪ್ರಥಮವಾಗಿ ವಿದ್ಯುತ್‌ ನೀಡಲಾಗಿತ್ತು. ಹೀಗಾಗಿ ಭಾರತದಲ್ಲಿ ವಿದ್ಯುಚ್ಛಕ್ತಿ ಪಡೆದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ. ರಾಜ್ಯಕ್ಕೆ ವಿದ್ಯುತ್ ಆಗಮನವಾಗಿ ಹನ್ನೊಂದು ದಶಕಗಳ ಇತಿಹಾಸವಿದೆ. ಇದಕ್ಕೆ ಮುಖ್ಯವಾಗಿ ಕಾರಣರಾದವರು ಮೈಸೂರು ಪ್ರಾಂತ್ಯದ ಮಹಾರಾಜರಾಗಿದ್ದ ಮಾನ್ಯ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು.

ಮೈಸೂರು ಸರ್ಕಾರವು ಒಂದು ಪ್ರತ್ಯೇಕ ವಿದ್ಯುತ್ ಇಲಾಖೆಯನ್ನು 15-03-1903 ರಲ್ಲಿ ಗೊಮೆಡ್ (ಗವರ್ನಮೆಂಟ್ ಆಫ್ ಮೈಸೂರು ಎಲೆಕ್ಟಿಕ್ ಡಿಪಾರ್ಟ್‌ಮೆಂಟ್) ಎಂಬ ಹೆಸರಿನೊಂದಿಗೆ ಪ್ರಾರಂಭಗೊಂಡು, 1957 ರಲ್ಲಿ ಕರ್ನಾಟಕದಲ್ಲಿ ಮೈಸೂರು ರಾಜ್ಯ ವಿದ್ಯುತ್ ಮಂಡಳಿಯು 1948 ರ ವಿದ್ಯುಚ್ಛಕ್ತಿ ಸರಬರಾಜು ಅಧಿನಿಯಮದ ಅಡಿಯಲ್ಲಿ ದಿನಾಂಕ: 18-06-1957 ರ ಪ್ರಕಾರ “ಮೈಸೂರು ರಾಜ್ಯ ವಿದ್ಯುತ್ ಮಂಡಳಿ” 1-10-1957 ರಲ್ಲಿ ಅಸ್ಥಿತ್ವಕ್ಕೆ ಬಂದಿತು.

20-07-1970 ರಂದು ನಮ್ಮ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗಾಗಿಯೇ “ಮೈಸೂರು ವಿದ್ಯುತ್ ನಿಗಮ” (ಮೈಸೂರು ಪವರ್ ಕಾರ್ಪೋರೇಷನ್ ಲಿ.. (ಎಂ.ಪಿ.ಸಿ) ರಚಿತವಾಗಿ ಕಾರ್ಯಾರಂಭ ಮಾಡಿತು. ಇದೇ ಮುಂದೆ “ಕರ್ನಾಟಕ ವಿದ್ಯುತ್ ನಿಗಮ” (ಕೆಪಿಸಿಎಲ್) ವಾಗಿ ಪರಿವರ್ತನೆ ಹೊಂದಿತು.

“ಮೈಸೂರು ರಾಜ್ಯ ವಿದ್ಯುತ್ ಮಂಡಳಿಯು 22-10-1973 ರಲ್ಲಿ ಕರ್ನಾಟಕ ಸ್ಟೇಟ್ ಎಲೆಕ್ಷಿಸಿಟಿ ಬೋರ್ಡ್” (ಕೆ.ಎಸ್.ಇ.ಬಿ) ಆಗಿ, ನಂತರ 01-11-1973 ರಿಂದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ (ಕೆ.ಇ.ಬಿ)ಯಾಗಿ ನಾಮಕರಣ ಹೊಂದಿತು. 01-08-1999 ರಲ್ಲಿ ವಿದ್ಯುತ್‌ ಕ್ಷೇತ್ರದಲ್ಲಿನ ಸುಧಾರಣೆಯನುಸಾರ ಕರ್ನಾಟಕ ವಿದ್ಯುಚ್ಚಕ್ತಿ ಮಂಡಳಿ (ಕ.ವಿ.ಮಂ) ಯನ್ನು ವಿಭಜಿಸಿ “ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ” (ಕ.ವಿ.ಪ್ರನಿ.ನಿ) ಹಾಗೂ ವಿಶ್ವೇಶ್ವರಯ್ಯ ವಿದ್ಯುತ್ ನಿಗಮ ನಿಯಮಿತ (ವಿ.ವಿ.ಎನ್.ಎಲ್) ಎಂದು ಪುನರ್‌ರಚಿಸಿ, ಪ್ರಸರಣ, ವಿತರಣೆಯ ಜವಾಬ್ದಾರಿಯನ್ನು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತಕ್ಕೆ ವಹಿಸಲಾಯಿತು.

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವನ್ನು 01-06-2002 ರಲ್ಲಿ ವಿಭಜಿಸಿ, ನಾಲ್ಕು ವಿದ್ಯುತ್ ಸರಬರಾಜು ಕಂಪನಿಗಳನ್ನು ಪ್ರಾರಂಭಿಸಲಾಯಿತು. ಅವು, “ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ”, “ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ”, “ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ”, “ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ” ಮತ್ತು 01-04-2005 ರಿಂದ ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ ವಿಭಜಿಸಿ, ಮಂಗಳೂರು ಹಾಗೂ ಮೈಸೂರಿನ “ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಗಳಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ.